ಶುಕ್ರವಾರ, ಜನವರಿ 27, 2012

ನನಗೇಕೆ ಬೇಕು ಸನ್ಮಾನ ...................................................??????


ನನಗೇಕೆ ಬೇಕು ಸನ್ಮಾನ .................?
ನಿಮ್ಮ ಹೃದಯದಲ್ಲಿರಲು ನನ್ನ ಸ್ಥಾನ .
ನನಗೇಕೆ ಬೇಕು ಸನ್ಮಾನ ................?


ಅಳುಕುತ್ತಾ  ಕೇಳಿದೆ ನನ್ನ  ಮನ 

.  ಅನ್ನ ನೀಡಿ ಹೊತ್ತು  ಪೊರೆವ ಭೂಮಿ
ಜೀವಿಗಳಿಗೆ ಉಸಿರು ನೀಡುವ ಆ  ಗಾಳಿ
ಇಳೆಯ  ನೀರಡಿಕೆ ನೀಗಿಪ   ಮಳೆ ಹನಿ       
ಎಂದೂ ಬೇಡಲಿಲ್ಲ  ಸನ್ಮಾನ  ...........!!
 ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಲಯಕ್ಕೆ ನೋವಿನ  ಸಿಂಚನ
ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ


ಬಣ್ಣ ಬಣ್ಣದ ಚಿತ್ತಾರ ಚೆಲುವಿನ ಚಿಟ್ಟೆಗಳು,
ಹಾಡಿ ಹಾರಿ ನಲಿದಿಹ ಶುಕ ಪಿಕಗಳು ,
ಮುಗ್ಧ ಮನದ ಆ  ಮುದ್ದು ಮಕ್ಕಳು
ಎಂದೂ ಕೋರಲಿಲ್ಲ   ಸನ್ಮಾನ ...!!

 ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಲಯಕ್ಕೆ ನಾಚಿಕೆಯ ಮಜ್ಜನ
ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ


 ಮಾಮರದಿ  ಹಾಡುವ  ಕುಹೂ ಕುಹೂ ಕೋಗಿಲೆ ,
 ಕಾನನದಿ ನರ್ತಿಸುವ ಮುದ್ದು ಮಯೂರಿಯ ಕಲೆ
ಕಾನನದ  ಆಭರಣಗಳಾದ ಆ  ವನ್ಯ ಜೀವಿಗಳೇ
    ಬಯಸಲಿಲ್ಲ ಸನ್ಮಾನ    ....!!
   ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಲಯಕ್ಕೆ ಕಪಟತೆಯ ದರ್ಶನ
ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ
ತೋಟದಲಿ  ಕಂಡ ಎಷ್ಟೊಂದು  ಹೂವು ಹಣ್ಣುಗಳು
 ನೀರಲ್ಲಿ ನಲಿಯುವ ಆ ವಿಸ್ಮಯ    ಮೀನುಗಳು
ಬಾನಲ್ಲಿ ಚಿತ್ತಾರ ಬಿಟ್ಟ  ಕಾಮ ಬಿಲ್ಲು
ಕೇಳಲಿಲ್ಲ ಸನ್ಮಾನ ........!!
  ನಾ ಪಡೆದರೆ .......ಸನ್ಮಾನ ,
ಆಗದೆ  ಬದುಕಿನ ಓಘಕ್ಕೆ   ಕುಟಿಲತೆಯ  ದರ್ಶನ

ಬೇಡ ಬಿಡಿ ...ನನಗೇಕೆ  ಬೇಕು ಸನ್ಮಾನ

ಇಡೀ  ಪರಿಸರಕ್ಕೆ ಬೇಡದಿದ್ದರೂ  ಯಾವುದೇ ಸನ್ಮಾನ
 ಬೇಕೇ ಬೇಕೆಂದು ಬಯಸುತ್ತಿದೆ ಈ  ಮರ್ಕಟ ಮನ
ಸನ್ಮಾನದ ಕೂಪಕ್ಕೆ ಬಿದ್ದು ಕರಗುತಿದೇ  ಜ್ಞಾನ
ಸತ್ಯ  ಎದುರಿದ್ದರೂ  ಕಲಿಯದ  ಈ ವ್ಯರ್ಥ ಜೀವನ .   

       7 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಸನ್ಮಾನಕ್ಕೆ ತಕ್ಕುದಾದ ವ್ಯಕ್ತಿತ್ವ ನಿಮ್ಮದು ಬಾಲಣ್ಣ. ಯಾವ ಸ್ವಾರ್ಥಕೂ ಒಗ್ಗಿಸದೆ ಸದ್ದೇ ಇರದೆ ಸೇವಾ ನಿರತ ಶ್ರಮಿಕ ನೀವು.

ಒಳ್ಳೆಯ ಬರಹಗಾರ
ಉತ್ತಮ ಬ್ಲಾಗಿಗ
ನುರಿತ ಛಾಯಾಗ್ರಾಹಕ

ಹೀಗೆ ಯಾವುದೇ ನಿಟ್ಟಿನಲ್ಲಿ ತೆಗೆದುಕೊಂಡರೂ ನೀವು ಸನ್ಮಾನ ಯೋಗ್ಯರು.

Dr.D.T.Krishna Murthy. ಹೇಳಿದರು...

ನಿಮ್ಮ ಒಳ್ಳೆಯ ಗುಣವೇ ಸನ್ಮಾನಕ್ಕೆ ಯೋಗ್ಯ.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

vaah !!...

very nice lines Balanna.....

Jai Ho !!

ಸೀತಾರಾಮ. ಕೆ. / SITARAM.K ಹೇಳಿದರು...

nice

ಮನಸು ಹೇಳಿದರು...

ವಾಹ್..!! ಸರ್ ಸುಂದರ ಸಾಲುಗಳು.
ಪ್ರಕೃತಿಯಲ್ಲಿರುವ ಜೀವರಾಶಿಗಳಿಗೆ ಬೇಡವಾದ ಸನ್ಮಾನ ನನಗ್ಯಾಕೆ ಎಂದು ಹೇಳುವುದಿದೆಯಲ್ಲ, ಯಾರಲ್ಲೂ ಬರಲಾರದ ಯೋಚನೆ, ಎಲ್ಲವೂ ಸ್ವಾರ್ಥ ಮನೋಭಾವವೇ ತುಂಬಿದೆ. ಹೀಗೆ ನಿಮ್ಮ ಹಾಗೆ ಒಳ್ಳೆಯದನ್ನು ಯೋಚಿಸುವವರಾರು.

Gopal Wajapeyi ಹೇಳಿದರು...

ಬಾಲೂಜೀ, ನಿಮ್ಮ ಮನದಷ್ಟೇ ಪರಿಶುದ್ಧ ಭಾವ ಇಲ್ಲಿದೆ ಈ ನಿಮ್ಮ ಹಾಡಿನಲ್ಲಿ...

bilimugilu ಹೇಳಿದರು...

Balu Sir,
Sooper.... kaviashaya ishtavaayithu :)