ಸೋಮವಾರ, ಫೆಬ್ರವರಿ 13, 2012

ಜೀವನವೆಂಬ ರೈಲು !!!!!

{ಚಿತ್ರ  ಕೃಪೆ ಅಂತರ್ಜಾಲ}


ಜೀವನದ ರೈಲು ಚಲಿಸುತ್ತಿದೆ 
ಭಾವನೆಗಳ ಕಂಬಿಯ  ಮೇಲೆ
ಮನಸುಗಳಿಗೆ ಕನಸು ತುಂಬಿ 
ಕನಸುಗಳಿಗೆ ಬಣ್ಣ ತುಂಬಿ 
ಈ ರೈಲು ಓಡುತ್ತಲೇ ಇದೆ ಜೀವನದ ರೈಲು ನಡೆದಿದೆ 
ಬೆಳಕು ಕತ್ತಲೆಯ ನಡುವೆ 
ಬೆಳಕು ಬಂದಾಗ ಮಿಂಚಿ 
ಕತ್ತಲೆ ಬಂದಾಗ ಕರಗಿ 
ಅನುದಿನವೂ ನಿರಂತರ ಸಾಗಿದೆ  


ಜೀವನದ ರೈಲು ಸಾಗಿದೆ 
ನಗು ಅಳುವಿನ  ಮೇಲೆ 
ನಕ್ಕಾಗ  ಸಂತಸದಿ ಹಿಗ್ಗಿ 
ಅತ್ತಾಗ  ದುಃಖದಿಂದ ಕುಗ್ಗಿ 
ನಿಲ್ಲದೆ ನಿರ್ಭಯದಿ ಸಾಗಿದೆ


ಜೀವನದ ರೈಲು ಚಲಿಸಿದೆ 
ಜ್ಞಾನ ಅಜ್ಞಾನದ ಹಾದಿಯಲ್ಲಿ 
ಜ್ಞಾನ ದೀಪದಲ್ಲಿ ಬೆಳಗಿ 
ಅಜ್ಞಾನದ ಕತ್ತಲಲ್ಲಿ ಕರಗಿ  


                                                           ಸಾಗುತ್ತಾ ಸುಜ್ಞಾನ ಹುಡುಕಿದೆ
{ಚಿತ್ರ  ಕೃಪೆ ಅಂತರ್ಜಾಲ}
ಜೀವನದ ರೈಲು ಮುನ್ನುಗ್ಗಿದೆ  
ಪಾಪಾ ಪುಣ್ಯಗಳ ಪಟ್ಟೆಮೇಲೆ  
ಪಾಪದ ನರಕದಲ್ಲಿ ನಲುಗಿ  
ಪುಣ್ಯದ ನಾಕದಲ್ಲಿ ಮಿನುಗಿ
ಗುರಿಯ ಹುಡುಕಿ ಸಾಗಿದೆ.