{ಚಿತ್ರ ಕೃಪೆ ಅಂತರ್ಜಾಲ} |
ಜೀವನದ ರೈಲು ಚಲಿಸುತ್ತಿದೆ
ಭಾವನೆಗಳ ಕಂಬಿಯ ಮೇಲೆ
ಮನಸುಗಳಿಗೆ ಕನಸು ತುಂಬಿ
ಕನಸುಗಳಿಗೆ ಬಣ್ಣ ತುಂಬಿ
ಈ ರೈಲು ಓಡುತ್ತಲೇ ಇದೆ
ಜೀವನದ ರೈಲು ನಡೆದಿದೆ
ಬೆಳಕು ಕತ್ತಲೆಯ ನಡುವೆ
ಬೆಳಕು ಬಂದಾಗ ಮಿಂಚಿ
ಕತ್ತಲೆ ಬಂದಾಗ ಕರಗಿ
ಅನುದಿನವೂ ನಿರಂತರ ಸಾಗಿದೆ
ಜೀವನದ ರೈಲು ಸಾಗಿದೆ
ನಗು ಅಳುವಿನ ಮೇಲೆ
ನಕ್ಕಾಗ ಸಂತಸದಿ ಹಿಗ್ಗಿ
ಅತ್ತಾಗ ದುಃಖದಿಂದ ಕುಗ್ಗಿ
ನಿಲ್ಲದೆ ನಿರ್ಭಯದಿ ಸಾಗಿದೆ
ಜೀವನದ ರೈಲು ಚಲಿಸಿದೆ
ಜ್ಞಾನ ಅಜ್ಞಾನದ ಹಾದಿಯಲ್ಲಿ
ಜ್ಞಾನ ದೀಪದಲ್ಲಿ ಬೆಳಗಿ
ಅಜ್ಞಾನದ ಕತ್ತಲಲ್ಲಿ ಕರಗಿ
ಸಾಗುತ್ತಾ ಸುಜ್ಞಾನ ಹುಡುಕಿದೆ
{ಚಿತ್ರ ಕೃಪೆ ಅಂತರ್ಜಾಲ} |
ಜೀವನದ ರೈಲು ಮುನ್ನುಗ್ಗಿದೆ
ಪಾಪಾ ಪುಣ್ಯಗಳ ಪಟ್ಟೆಮೇಲೆ
ಪಾಪದ ನರಕದಲ್ಲಿ ನಲುಗಿ
ಪುಣ್ಯದ ನಾಕದಲ್ಲಿ ಮಿನುಗಿ
ಗುರಿಯ ಹುಡುಕಿ ಸಾಗಿದೆ.
ಜೀವನದ ರೈಲು ಚಲಿಸಿದೆ ಹುಟ್ಟುಸಾವಿನ ಚಕ್ರಗಳ ಮೇಲೆ
ಹುಟ್ಟಿದಾಗ ತಾಯಿ ಮಡಿಲು
ಸಾಯುವಾಗ ಭೂಮಿ ಒಡಲು
ಸೇರಿ ಪಯಣ ಸಾಗಿದೆ
{ಚಿತ್ರ ಕೃಪೆ ಅಂತರ್ಜಾಲ} |
ಜೀವನದ ರೈಲು ಸಾಗುತ್ತಲೇ ಇದೆ
ಹುಟ್ಟಿನಿಂದ ಸಾವಿನ ವರಗೆ
ಕನಸುಗಳ ಗುರಿಯ ಹಾದಿಯಲ್ಲಿ
ವಯಸ್ಸಿನ ನಿಲ್ದಾಣಗಳ ಸರ ಸರನೆ ದಾಟಿ
ನಾಗಾಲೋಟದಿ ಓಡುತ್ತಾ ಓಡುತ್ತಾ
ಪಯಣದ ಹಾದಿಯಲ್ಲಿ ಅಸ್ತಂಗತವಾಗುತ್ತದೆ .
[ ನಿಮ್ಮೊಳಗೊಬ್ಬ ಬಾಲು ]
13 ಕಾಮೆಂಟ್‌ಗಳು:
FINE
ಬಾಲಣ್ಣಾ...
ತುಂಬಾ ಸುಂದರ ಸಾಲುಗಳು !!
ನಿಮ್ಮ ಪ್ರೀತಿ ಹಸಿರಾಗಿರಲಿ...
ಬಾಲು ಸರ್,
ತುಂಬಾ ಚೆನ್ನಾಗಿದೆ ಕವನದ ಪದಗಳು ಮತ್ತು ಸಾಲುಗಳು....ನಿಮ್ಮ ಪ್ರೀತಿ ಸದಾ ಹೀಗೆ ಇರಲಿ...
ಕವಿತೆ ತುಂಬಾ ಅರ್ಥವತ್ತಾಗಿದೆ ಸರ್...
ಪ್ರಕಾಶ್ ಹೆಗ್ಡೆ :-) ಥ್ಯಾಂಕ್ಸ್
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಶಿವೂ :- ) ನಿಮ್ಮ ಮೆಚ್ಚುಗೆ ಮಾತುಗಳಿಗೆ ಥ್ಯಾಂಕ್ಸ್.
ಈಶ್ವರ್ ಪ್ರಸಾದ್ :- ) ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ. ನಿಮ್ಮ ಮೆಚ್ಚುಗೆ ಮಾತುಗಳಿಗೆ ಥ್ಯಾಂಕ್ಸ್.
ಬಾಲೂ ಸರ್;ಸುಂದರ ಕವನ.ನಿಮ್ಮ ಜೀವನ ಬಂಡಿ ಹೀಗೆಯೇ ಪ್ರೀತಿಯ ಹಳಿಗಳ ಮೇಲೆ ಸಾಗಲಿ.
ಪ್ರೇಮಿಗಳ ದಿನಾಚರನೆಗೆ ರಸಿಕ ಬಾಲಣ್ಣರಿಂದ ರೋಚಕ ಕವನ!
ಜೀವನವನ್ನು ರೈಲಿಗೆ ಹೋಲಿಸಿ ನೀವು ಬರೆದುಕೊಟ್ಟ ಪ್ರತಿ ಚರಣದಲ್ಲೂ ಬದುಕಿನ ಸಾಮರಸ್ಯ ಮತ್ತು ಉತ್ಕಟ ಪ್ರೀತಿಯ ಉಲ್ಲೇಖವಿದೆ.
ನಿಮ್ಮ ಮನೆಯವರಿಗೆಲ್ಲ ಶುಭಾಶಯಗಳು.
ವಾರೆ ವಾಹ್..!! ಸರ್ ಸಕ್ಕತ್ತಾಗಿದೆ ಕವನ
ಬಾಲು ಸೂಪರ್ ಆಗಿದೆ...ಜೀವನ ಚಕ್ರದ ಬಂಡಿ ...ಅನ್ನೋದು ನಿಜ ಬಹಳ ಸುಂದರ ಹೋಲಿಕೆಯ ಕವನಗಳು...
ತುಂಬಾ ಚೆನ್ನಾಗಿದೆ.
ಕೊನೆಯ ಸಾಲುಗಳು ತುಂಬಾ ಇಷ್ಟವಾಯಿತು.
ಸ್ವರ್ಣಾ
ತುಂಬಾ ಚೆನ್ನಾಗಿದೆ..
ಕಾಮೆಂಟ್ ಪೋಸ್ಟ್ ಮಾಡಿ