ಭಾವಗೀತೆಗಳ ಭಂಡಾರವೇ
ನೀನು , ಓ ಮುದ್ದು ಮಗುವೆ
ನಿನ್ನೊಂದೊಂದು ಲೀಲೆಯೂ
ಒಂದು ಸುಖದ ಗೀತೆ !
ನೀನು ಆಗಮಿಸುವೆಯೆಂದು
ಅರಿತಾಗ ನಾವು ಹೆಣೆದ
ಕನಸುಗಳೆಷ್ಟು ಬಲ್ಲೆಯಾ ?
ನಿನ್ನ ಬರುವಿಕೆಗಾಗಿ ಮೈ
ಮನವೆಲ್ಲ ಕಾತುರತೆಯ
ಹಂದರವಾಗಿ ನಿದ್ರೆ ಜಾರಿದ
ರಾತ್ರಿಗಳೆಷ್ಟು ಬಲ್ಲೆಯಾ ?
ನನಗೆ ನಡೆದ ಆರೈಕೆಗಳೆಲ್ಲಾ
ನಿನ್ನ ಬರುವಿಕೆಗೆ ನೇಯ್ದ
ರತ್ನಕಂಬಳಿ ಕಂದಾ.......!

ನಿನ್ನ ಆ ಚೆಂದುಟಿ ನಗುವ
ನೆನೆಯುತ್ತಾ ನನ್ನ ಕ್ಲೇಶಗಳೆಲ್ಲಾ
ಕಳೆದೇಹೋದವು ಕಂದಾ ...........!
ಅಂತೂ ನೀನು ಧರೆಗಿಳಿದೆ
ನಮ್ಮೆಲ್ಲ ಕನಸುಗಳ ಸಾಕಾರ
ಮೂರ್ತಿಯಾಗಿ ಬಂದೆ ನೀ ಕಂದಾ .......!
ಅನುಭವಿಸಿದ ಆದಿನಗಳ ನೋವಿಗೆ
ಇಂದು ನಿನ್ನ ನಗುವಿನ ಜೇನಿನ ಸ್ವಾದ
ನೋವಿನಲ್ಲೂ ಸುಖವನಿತ್ತೆ ಓ ಕಂದಾ .....!

ಸುಖವಾಗಿರು ಮುದ್ದು ಮಗುವೆ
ತಾಯ ಮಡಿಲ ಸೌಭಾಗ್ಯ ನಿನಗೆ
ಜೀವನದ ಸುಧೆ ನಿನ್ನದಾಗಲಿ ..........ಕಂದಾ !
ತಾಯ ಹಾಲಿನ ಅಮೃತ ನಿನಗೆ
ಪ್ರೀತಿ ಹಾರೈಕೆಯ ಜೇನಿನ ಜೊತೆಗೆ
ಜಗದ ಕಣ್ಮಣಿಯಾಗಿ ಬೆಳಗು ............ಕಂದಾ !
ಈ ತಾಯ ಹಾರೈಕೆ ಸದಾ ನಿನಗೆ
ನಿನ್ನ ಆಗಮನ ಹೊಸಬೆಳಕು ನಮಗೆ
ವಂಶದ ಬೆಳಕಾಗಿ ಬೆಳಗುತಿರು ..............ಓ ಕಂದಾ !!!
[ಕವಿತೆ ರಚನೆ :-) ಶಾರದ ಬಾಲಸುಬ್ರಹ್ಮಣ್ಯ ]
[ಈ ಕವಿತೆಯಲ್ಲಿ ಬಳಸಲಾಗಿರುವ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಪಡೆಯಲಾಗಿದೆ . ಚಿತ್ರತೆಗೆದ ಮೂಲ ಛಾಯಾಗ್ರಾಹಕರಿಗೆ ಕೃತಜ್ಞತೆಗಳು]
6 ಕಾಮೆಂಟ್‌ಗಳು:
ಭಾವನೆಗಳು ಶಬ್ಧಗಳ ರೆಕ್ಕೆ ಪಡೆದು..
ಅಂತರಂಗದಲ್ಲಿ ಹಾರಿವೆ...
ನಿಮ್ಮ ಶ್ರೀಮತಿಯವರಿಗೆ..
ಅವರ ಶಬ್ಧ ಭಾವಗಳಿಗೆ ನಮನಗಳು...
ಚಂದದ ಕವನ....
ಚೆಂದದ ಕವನ.ಬಾಲು ಸರ್,ನಿಮ್ಮ ಶ್ರೀಮತಿಯವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ.ನಮಸ್ಕಾರ.
ಶಾರದ ಮೇಡಂ,
ಕಂದನ ಆಗಮನದ ತಾಯಿಯ ನಿರೀಕ್ಷೆ ಆತ್ಮೀಯವಾಗಿ ಒಡಮೂಡಿದೆ.
ನಿಮ್ಮ ಭಾಷಾ ಬಳಕೆಯಲ್ಲೂ, ಭಾವ ಪೂರ್ಣತೆಯಲ್ಲೂ ಲಾಲಿತ್ಯತೆ ಮತ್ತು ನೇಕಾರತನ ಪ್ರಶಂಸನೀಯ.
Madam, nimma kavana bahaLa sogasaagide :)
ಅಮ್ಮನಿಗೆ ಕವನದ ಶುಭಾಶಯ ಹೇಳಿ ಸರ್ :) :)
nice
ಕಾಮೆಂಟ್ ಪೋಸ್ಟ್ ಮಾಡಿ