,ತಂದಾನಿ ತಾನಾ ತಂದಾನಿ ತಾನಾ ಜೀವನ ಸಂಜೀವನ. ಜನರಿಂದ ತುಂಬಿಹೋಗಿದೆ ನಮ್ಮೆಲ್ಲರ ಜೀವನ!!!!!!!,
ಕಪ್ಪು ಜನ , ಬಿಳಿಯ ಜನ ,ಕೆಂಚ ಪರಂಗಿ ಜನ ,
ಬಣ್ಣ ಬಣ್ಣದ ತೊಗಲಿನ ಬಗೆ ಬಗೆಯ ಜನ ,
ವಿಶ್ವದೆಲ್ಲಡೆ ಹರಿದು ಹಂಚಿಹೋದ ಸರ್ವ ಜನ ,
ಈ ಜನರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ.
-----------------------------------------------------------------------------------------------------------
ಅನ್ನ ಬೆಳೆವ ಮಣ್ಣು ನೆಚ್ಚಿದ ರೈತ ಜನ,
ಹಣವಿದ್ದೂ ಅನ್ನ ತಿನ್ನಲಾರದ ಸಿರಿಜನ,
ಹಸಿವ ತಾಳದೆ ಬೇಡುವ ತಿರುಕ ಜನ
ಇವರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ. ------------------------------------------------------------------------------------------------------------
ಶಾಂತಿ ಶಾಂತಿ ಶಾಂತಿ ಎಂದ ಜನ ,
ಕ್ರಾಂತಿ ಕ್ರಾಂತಿ ಕ್ರಾಂತಿ ಎಂದ ಜನ ,
ಶಾಂತಿ, ಕ್ರಾಂತಿಯ ಜಪದಲ್ಲಿ ಮುಕ್ಕಿದ ಜನ
ಈ ಜನರ ನಡುವೆ ಸಾಗಿದೆ ನಮ್ಮೆಲ್ಲರಜೀವನ,
------------------------------------------------------------------------------------------------------------
ನೆತ್ತರ ನೀಡಿ ಜೀವ ಉಳಿಸುವ ಜನ
ನೆತ್ತರ ಕುಡಿದು ಜೀವ ತೆಗೆಯುವ ಜನ
ನೆತ್ತರಿಗೂ ಧರ್ಮಕ್ಕೂ ಕೊಂಡಿಯಾದ ಜನ
ಈ ಜನರೆಲ್ಲರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ.
------------------------------------------------------------------------------------------------------------ ಬಗೆಬಗೆ ಯಂತ್ರ ಸೃಷ್ಟಿಸುವ ವಿಜ್ಞಾನಿ ಜನ
ಯಂತ್ರಗಳ ಹೊಡೆತಕ್ಕೆ ಸಿಕ್ಕಿ ನರಳುತಿರುವ ಜನ
ವಿಜ್ಞಾನದ ನರಕದೊಳಗೆ ಸಿಕ್ಕ ವಿಶ್ವದ ಜನ
ಈ ಜನೆರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ.

------------------------------------------------------------------------------------------------------------
ದೇಶಗಳ ನಡುವೆ ಗೋಡೆ ಕಟ್ಟಿದ ಜನ ,
ವಿಸಾ ಪಾಸ್ಪೋರ್ಟ್ ಸೃಷ್ಟಿಸಿದ ಆ ಜನ
ಒಂದೇ ಭೂಮಿ ಒಂದೇ ಜೀವನಎನ್ನದಜನ ಈ ಜನರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ.
,
ವಿಶ್ವ ಪ್ರೀತಿಸುವ ಹಲವಾರು ಸಜ್ಜನ ಜನ
ವಿಶ್ವ ದ್ವೇಷಿಸುವ ಗೊಂದಲದ ದುರ್ಜನ ಜನ
ಹಲವು ಗೊಂದಲದಿ ಸಿಲುಕಿದ ಸಾಮಾನ್ಯ ಜನ
ಈ ಜನರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ.
-----------------------------------------------------------------------------------------------------------
ಜೀವನ ನಮ್ಮೆಲ್ಲರ ಜೀವನ ಆಗಲಿ ಪಾವನ
ಕತ್ತಲೆಯ ವಿಶ್ವಕ್ಕೆ ಬೆಳಕು ನೀಡಲಿ ಎಲ್ಲರಮನ ,
ವಿಶ್ವ ಜನರ ಮನದಿ ಅರಳಲಿ ಪ್ರೀತಿಯ ಕವನ
ಸಾಗಲಿ ನೆಮ್ಮದಿಯತ್ತ ಎಲ್ಲಾ ಬಣ್ಣದ ಜನರ ಜೀವನಯಾನ.
[ಕವಿತೆಗೆ ಬಳಸಲಾದ ಮೇಲಿನ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಪಡೆದು ಕೃತಜ್ಞತಾ ಪೂರ್ವಕವಾಗಿ ಬಳಸಿಕೊಳ್ಳಲಾಗಿದೆ ]

9 ಕಾಮೆಂಟ್ಗಳು:
kaviteya bhaava tumbaa ishTa aaytu sir.....
tumbaa chennaagide...
ಸೊಗಸಾದ ಕವಿತೆಗಳು ಬಾಲೂ ಸರ್...
ಏನೇ ಆದರೂ ಜನರ ನಡುವಿನ ಬದುಕು ನಮ್ಮದು... !!
ಹೇಗೆಲ್ಲಾ ಇರ್ತಾರೆ..
ನಾವೂ ಕೂಡ ಹೇಗೆಲ್ಲಾ ಇರ್ತಿವಿ...
ದಿನಕರ್ ಹೇಳಿದ ಹಾಗೆ ಭಾವ ಸೊಗಸಾಗಿ ಮೂಡಿ ಬಂದಿದೆ..
ಜನಾಜನ ಸುಂದರ
ಜಗವೇ ಜನಮಂದಿರ
ಜನಜೀ ವನವಾದರೆ
ಜೀ-ವನ ಋಣವಾಗುವುದು.
ಬಹಳ ಚನಾಗಿದೆ ಫೋಟೋಗಳನ್ನ ಹೆಣೆದ ಕವನದ ಪರಿ, ಬಾಲೂ..
SIMPLY BEAUTIFUL
tumba chennagide sir...
Super aagide sir...
ಬಾಲು ಸಾರ್ ಕವನ ಚೆನ್ನಾಗಿದೆ,
ಜನ ವಿಲ್ಲದ ಜೀವನ ಜೀವನವೇ ? ಇಲ್ಲ ಬರೀ ನೊವೆ ಎಂಬ ಕಟು ಸತ್ಯ ಜನವರಿತು ಸಹನೆ, ಶಾಂತಿ, ನೆಮ್ಮದಿ, ಉತ್ಸಾಹ, ಸಹಿಷ್ಣುತೆ, ಸ್ನೇಹ, ಪ್ರೀತಿ, ಮಮತೆಯ ಕಡೆ ಮುಖ ಮಾಡಿದರೆ ಈ ಗ್ರಹದ ಮೇಲಿನ ಬದುಕು ಹಸನಾಗಿ ವಿಶ್ವ ಬ್ರಾತ್ರುತ್ವದ ಫಲವನ್ನು ಅನುಭವಿಸಿ ಬದುಕಿನ ಸಾರ್ಥಕ್ಯವನ್ನು ಕಂಡುಕೊಳ್ಳಬಹುದು.
ಜನ ಸಾಗರ ಸಮಷ್ಟಿಯ ಬೆಸೆಯಲಿ. ಗಡಿ ಭಾಷೆ ವರ್ಣ ಬಂದೂಕಿನ ಮೊನೆ ಮೀರಿ ಮಾನವೀಯತೆ ಮೆರೆಯಲಿ.
ಒಳ್ಳೆಯ ಚಿತ್ರ ಕವನಕ್ಕಾಗಿ ಅಭಿನಂದನೆಗಳು.
ಬಾಲೂ ಸರ್;ಸುಂದರ ಚಿತ್ರ ಕವನ.ಅಭಿನಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ