ಶನಿವಾರ, ನವೆಂಬರ್ 19, 2011

ಜೀವನ ಪಯಣದ ಯಾತ್ರೆ !!!!

ವರ್ಷಗಳೇ ಹಾಗೆ !!!!
ಸಮುದ್ರದ ತೆರೆಗಳಂತೆ
ತೆರೆಗಳಲ್ಲಿನ ನೋರೆಗಳಂತೆ
ಬರುತ್ತಲೇ ಇರುತ್ತವೆ                                                                                                                                 ಸಿಹಿ ಕ್ಷಣಗಳ ತರುತ್ತವೆ                                                                                                                            ಹಿಂದೆಸರಿದು ಮರೆಯಾಗುತ್ತವೆ.


ಸಾಧನೆಗಳೇ ಹಾಗೆ !!!!!!
ಶರಧಿಯಲ್ಲಿನ ಬಂಡೆಗಳಂತೆ
ಕಷ್ಟದಲೆಗಳ ಎದುರುನಿಂತು
ನಿರಂತರ ಹೋರಾಡುತ್ತಾ                                                                                                                             ಹಿರಿಮೆ ಸಾರುತ್ತವೆ
  
ಕಷ್ಟಗಳೇ ಹಾಗೆ !!!!!!!
ಕಡಲತಡಿಯ ಮರಳಿನಂತೆ
ಛಲದಲೆಗಳ ಹೊಡೆತತಿಂದು
ನಿರಂತರ ಜಾರುತ್ತಾ                                                                                                                      ಜೀವದಲೆಗಳೊಡನೆ  ಮರೆಯಾಗುತ್ತವೆ
 


ಜೀವನಯಾನವೇ ಹಾಗೆ !!!!!
ಕಡಲನೌಕೆಯ ಯಾನದಂತೆ
ಜೀವನದಲೆಗಳ ಹತ್ತಿಳಿದು
ನಿರಂತರ ಚಲಿಸುತ್ತಾ
ಜೀವನದಂತ್ಯ ತಲುಪುತ್ತದೆ  !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!




[ಇದು ನಾನು ಬರೆದ ಮೊದಲ ಕವಿತೆ ೨೧ -೦೬-೨೦೦೭ ]




























8 ಕಾಮೆಂಟ್‌ಗಳು:

Badarinath Palavalli ಹೇಳಿದರು...

ದಾಂಪತ್ಯದ ಬ್ಲಾಗ್ ರಮಣೀಯವಾಗಿದೆ.

ಮೈಸೂರು ಮಲ್ಲಿಗೆ ಕವಿಯಂತೆ ಮೈಸೂರು ಬಾಲು ಅವರೂ ಜನಮಾನಸದಲ್ಲಿ ನೆಲೆ ನಿಲ್ಲಲಿ ಎಂದು ಹಾರೈಸುತ್ತೇನೆ.

ಉಡುಗೊರೆ - 1 ಸೂಪರ್ರಾಗಿತ್ತು.

ದಿನಕರ ಮೊಗೇರ ಹೇಳಿದರು...

tumbaa chennaagide sir.....

Dr.D.T.Krishna Murthy. ಹೇಳಿದರು...

ಬಾಲೂ ಸರ್;ನಿಮ್ಮ ಕವಿತಾ ಶಕ್ತಿಯೂ ಅದ್ಭುತವಾಗಿತೆ.ನಿಮ್ಮಿಂದ ಇನ್ನಷ್ಟು ಸೂಪರ್ ಕವನಗಳು ಬರಲಿ.ಅಭಿನಂದನೆಗಳು.

ಮನಸು ಹೇಳಿದರು...

chennagide sir munduvarisi heege

mshebbar ಹೇಳಿದರು...

ಒಂದು ಕಮೆಂಟನ್ನು ಪೋಸ್ಟ್ ಮಾಡಿದ್ದೇನೆ
ಅದೇನೆಂದರೆ,ಅದೇನೆಂದರೆ ಕವಿತೆ "ಬೊಂಬಾಟ್"

manju ಹೇಳಿದರು...

ಸು೦ದರ ಕವಿತೆ, ಪ್ರಕಟಿಸುವ ಮುನ್ನ ವ್ಯಾಕರಣದ ಬಗ್ಗೆಯೂ ಕೊ೦ಚ ಗಮನ ಹರಿಸಿರಿ. ಶುಭವಾಗಲಿ. :-)

Pradeep Rao ಹೇಳಿದರು...

chendada saalugalu baalu saar

balasubramanya ಹೇಳಿದರು...

ಮೊದಲ ಪ್ರಯತ್ನದ ಕವಿತೆಯನ್ನು ಒಪ್ಪಿ ಪ್ರೋತ್ಸಾಹದ ಮಾತನ್ನು ಆಡಿದ ಎಲ್ಲರಿಗೂ ನನ್ನ ಧನ್ಯವಾದಗಳು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]