,ತಂದಾನಿ ತಾನಾ ತಂದಾನಿ ತಾನಾ ಜೀವನ ಸಂಜೀವನ. ಜನರಿಂದ ತುಂಬಿಹೋಗಿದೆ ನಮ್ಮೆಲ್ಲರ ಜೀವನ!!!!!!!,
ಕಪ್ಪು ಜನ , ಬಿಳಿಯ ಜನ ,ಕೆಂಚ ಪರಂಗಿ ಜನ ,
ಬಣ್ಣ ಬಣ್ಣದ ತೊಗಲಿನ ಬಗೆ ಬಗೆಯ ಜನ ,
ವಿಶ್ವದೆಲ್ಲಡೆ ಹರಿದು ಹಂಚಿಹೋದ ಸರ್ವ ಜನ ,
ಈ ಜನರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ.
-----------------------------------------------------------------------------------------------------------
ಅನ್ನ ಬೆಳೆವ ಮಣ್ಣು ನೆಚ್ಚಿದ ರೈತ ಜನ,
ಹಣವಿದ್ದೂ ಅನ್ನ ತಿನ್ನಲಾರದ ಸಿರಿಜನ,
ಹಸಿವ ತಾಳದೆ ಬೇಡುವ ತಿರುಕ ಜನ
ಇವರ ನಡುವೆ ಸಾಗಿದೆ ನಮ್ಮೆಲ್ಲರ ಜೀವನ. ------------------------------------------------------------------------------------------------------------
ಶಾಂತಿ ಶಾಂತಿ ಶಾಂತಿ ಎಂದ ಜನ ,
ಕ್ರಾಂತಿ ಕ್ರಾಂತಿ ಕ್ರಾಂತಿ ಎಂದ ಜನ ,
ಶಾಂತಿ, ಕ್ರಾಂತಿಯ ಜಪದಲ್ಲಿ ಮುಕ್ಕಿದ ಜನ
ಈ ಜನರ ನಡುವೆ ಸಾಗಿದೆ ನಮ್ಮೆಲ್ಲರಜೀವನ,
------------------------------------------------------------------------------------------------------------